ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಕೊಳವೆ ಭಾವಿ ಕೊರೆಯಲು ನೊಂದಣಿ ಕಡ್ಡಾಯ -ಜಿಲ್ಲಾಡಳಿತ ಆದೇಶ

ಕೊಳವೆ ಭಾವಿ ಕೊರೆಯಲು ನೊಂದಣಿ ಕಡ್ಡಾಯ -ಜಿಲ್ಲಾಡಳಿತ ಆದೇಶ

Sat, 24 Apr 2010 12:53:00  Office Staff   S.O. News Service
ವಿಜಾಪುರ,  ಏಪ್ರೀಲ್ ೨೪-   ಭಾರತದ ಸರ್ವೋಚ್ಚ ನ್ಯಾಯಲಯದ ನಿರ್ದೇಶನದಂತೆ ಜಿಲ್ಲೆಯಲ್ಲಿ ಕೊಳವೆ ಭಾವಿಗಳನ್ನು ಕೊರೆಯಿಸುವ ಭೂಮಾಲೀಕರು ಅಥವಾ ರೈತರು ಅಥವಾ ಏಜೆನ್ಸಿಗಳು ಕಡ್ಡಾಯವಾಗಿ ಅನುಮತಿ ಪಡೆಯಲು ಜಿಲ್ಲಾಧಿಕಾರಿ ಆರ್.ಶಾಂತರಾಜ್ ಆದೇಶ ಹೊರಡಿಸಿದ್ದಾರೆ.
        ತೆರೆದ ಕೊಳವೆ ಭಾವಿಗಳಲ್ಲಿ ಮಕ್ಕಳು ಬಿದ್ದು ಸಂಭವಿಸಿದ ದುರಂತಗಳ ಹಿನ್ನೆಲೆಯಲ್ಲಿ ಮುಂಜಾಗೃತ ಕ್ರಮವಾಗಿ ದುರಂತ ಪ್ರಕರಣ ತಡೆಯುವ ನಿಟ್ಟಿನಲ್ಲಿ ಕೊಳವೆಭಾವಿಗಳನ್ನು ಕೊರೆಯಲು ಉದ್ದೇಶಿಸಿದ  ಭೂಮಾಲೀಕರು  ೧೫ ದಿನಗಳ ಮುಂಚಿತವಾಗಿ ಜಿಲ್ಲಾಧಿಕಾರಿಗಳಿಗೆ, ಭೂವಿಜ್ಞಾನಿಗೆ, ಸಂಬಂಧಿಸಿದ ಗ್ರಾಮ ಪಂಚಾಯತ್‌ಗೆ, ಪುರ ಸಭೆ, ನಗರ ಸಭೆಗಳಿಗೆ ಲಿಖಿತವಾಗಿ ಮಾಹಿತಿ ನೀಡುವುದು ಕಡ್ಡಾಯ.
        ಕೊಳವೆ ಭಾವಿಗಳನ್ನು ಕೊರೆಯುವ ಸರ್ಕಾರಿ, ಅರೆ ಸರ್ಕಾರಿ,ಖಾಸಗಿ ಇತ್ಯಾದಿ ಡ್ರಿಲ್ಲಿಂಗ್ ಏಜೆನ್ಸಿಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೊಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.
        ಕೊಳವೆ ಭಾವಿ ಕೊರೆಯಲು ಅನುಮತಿ ಪಡೆದ ಮೇಲೆ ಕೊಳವೆ ಭಾವಿ ಕೊರೆಯುವ ಸ್ಥಳದಲ್ಲಿ ನಾಮ ಫಲಕ ಬರೆದು ಪ್ರದರ್ಶಿಸಬೇಕು. ಫಲಕದಲ್ಲಿ ಕೊಳವೆ ಭಾವಿ ಕೊರೆದ ಏಜೆನ್ಸಿಯ ಸಂಪೂರ್ಣ ವಿಳಾಸ, ಮಾಲೀಕನ ಸಂಪೂರ್ಣವಿಳಾಸ, ಭಾವಿ ಸುತ್ತಲೂ ತಂತಿಬೇಲಿ ಅಥವಾ ರಕ್ಷಣಾಗೋಡೆ ನಿರ್ಮಾಣ, ಕೊಳವೆ ಭಾವಿ ಸುತ್ತಲೂ ನೆಲದ ಮಟ್ಟದಿಂದ ಮೇಲೆ ೦.೩೦ ಮೀಟ್‌ರ್ ಮತ್ತು ನೆಲದಿಂದ ಕೆಳಗೆ ೦.೩ ಮೀಟರ ಇರುವಂತೆ ಸಿಮೆಂಟ್ ಕಾಂಕ್ರಿಟಿನ ಪ್ಲಾಟ್ ಫಾರ್ಮ ನಿರ್ಮಾಣ,ಕೊಳವೆ ಭಾವಿಯ ಕೇಸಿಂಗ್ ಪೈಪಿಗೆ ಮುಚ್ಚಳ ಹಾಕುವುದು, ಕೊಳವೆ ಭಾವಿ ಕೊರೆಯುವ ಸಮಯದಲ್ಲಿ ಉಂಟಾಗುವ ತಗ್ಗು ಕಾಲುವೆಗಳನ್ನು ಮುಚ್ಚುವುದು, ವಿಫಲವಾದ ಕೊಳವೆ ಭಾವಿಗಳನ್ನು ಸಂಪೂರ್ಣವಾಗಿ ಕಲ್ಲು,ಉಸುಕು,ಮಣ್ಣು ಇತ್ಯಾದಿಗಳಿಂದ ತಳದಿಂದ ಮೇಲಿನವರೆಗ ಭರ್ತಿ ಮಾಡುವುದು, ಹಾಗು ಕೊಳವೆ ಭಾವಿಯ ಪಂಪನ್ನು ದುರಸ್ತಿಗೆ ತೆಗೆದಾಗಲೂ ಸಹ ಕೇಸಿಂಗ್ ಪೈಪಿಗೆ ಮುಚ್ಚಳ ಹಾಕುವ ಕುರಿತಂತೆ ಹಲವು ಸುರಕ್ಷತಾ ಮಾರ್ಗ ಸೂಚಿಗಳನ್ನು ನೀಡಲಾಗಿದೆ.
        ಇದಲ್ಲದೆ ಜಿಲ್ಲಾಡಳಿತ ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿನ ಕೊಳವೆ ಭಾವಿಗಳ ಮಾಹಿತಿ, ಈ ಪೈಕಿ ಬಳಕೆಯಲ್ಲಿರುವ ಕೊಳವೆ ಭಾವಿಗಳು, ವಿಫಲವಾದ ಕೊಳವೆ ಭಾವಿಗಳು, ವಿಫಲವಾದ ಭಾವಿಗಳ  ಪೈಕಿ ತೆರೆದಿಟ್ಟ ಹಾಗೂ ಮುಚ್ಚಿದ ಕೊಳವೆ ಭಾವಿಗಳ ಕುರಿತಂತೆ ಮಾಹಿತಿಯನ್ನು ನಿರ್ವಹಿಸುತ್ತದೆ. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಕೊಳವೆ ಭಾವಿಗಳ ಮೇಲ್ವಿಚಾರಣೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಮತ್ತು ಕೃಷಿ ಇಲಾಖಾ ಅಧಿಕಾರಿಗಳಿಗೆ ನಗರ ಮತ್ತು ಪಟ್ಟಣ ಪ್ರದೇಶದ ಕೊಳವೆ ಭಾವಿಗಳ ಉಸ್ತುವಾರಿಯನ್ನು ಕಿರಿಯ ಅಭಿಯಂತರರು,ಭೂ ವಿಜ್ಙಾನಿಗಳ ನಿರ್ವಹಣೆಗೆ ವಹಿಸಲಾಗಿದೆ.
        ಯಾವುದೇ ಕೊಳವೆ ಭಾವಿಗಳನ್ನು ಯಾವುದೇ ಹಂತದಲ್ಲಿ ಕೈಬಿಟ್ಟಲ್ಲಿ, ವಿಫಲವಾದಲ್ಲಿ ಮಾಲೀಕರು  ಸಂಭಂದಿಸಿದ ಭೂವಿಜ್ಞಾನಿಗಳು ಪಂಚಾಯತ ಇಂಜಿನಿಯರುಗಳು ನಗರ ಪುರಸಭೆ‌ಅಧಿಕಾರಿಗಳಿಂದ ಭಾವಿ ಮುಚ್ಚಿದ ಕುರಿತಂತೆ ಅಧಿಕೃತ ಪ್ರಮಾಣ ಪತ್ರ ಪಡೆಯಬೇಕು. ಈ ನಿಯಮಗಳನ್ನು ಅಧಿಕಾರಿಗಳು ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.


Share: